Kannada Rajyotsava 2022
RajaRajeswari College of Engineering, Bengaluru has organized 67th KANNADA RAJYOTSAVA – 2022 “ISIRI”, on 19th November 2022 at RajaRajeswari College of Engineering Campus, Mysore Road, Bengaluru.
The “ISIRI” was inaugurated by the Chief Guest Kaviratna Dr. V Nagendra Prasad, Poet and Lyricist. In his speech, he gave an insightful talk which explained the rich heritage of Karnataka and different dimensions of Kannada literature. Guests of Honors were Ms. Megha Shetty, Cine Actress; Ms. Tapashwini Poonacha, Cine Actress and Mr. Somanna Maachimada, Indian Journalist. The occasion was also graced with the presence of Dr. S Vijayanand, Executive Director,RRGI; Sri C N Seetharam, CEO, RRGI and Dr. T Chandrashekar, Principal, RajaRajeswari College of Engineering.
KANNADA RAJYOTSAVA – 2022 “ISIRI” was celebrated to showcase our richness of Karnataka heritage and to create awareness to the students about significance of the Kannada language. The entire college were in a festive and traditional look on this day and Kannada Anthem “Jaya Bharata Jananiya Tanujaathe” were chanted by chorus. The ISIRI event is highlighted by RajaRajeswari College of Engineering students performing Bharathanatyam, Beedi Nataka, folk dance and other events. Apart from this, professionals were invited to exhibit Dollu, Tamate, Kamsale, Pooja Kunitha, Chilipili Gombe and Hulivesha which depicts the culture of state Karnataka. The mesmerizing performance held the audience spell bound and the campus resounded with their drum beats. Students exhibited their talents to show their tribute to the state Karnataka by participating enthusiastically in the celebration.
ಬೆಂಗಳೂರು ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ:19.11.2022 ರಂದು 67 ನೇ ಕನ್ನಡ ರಾಜ್ಯೋತ್ಸವ “ಐಸಿರಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಕವಿ ಮತ್ತು ಸಾಹಿತಿಗಳಾದ ಕವಿರತ್ನ ಡಾ.ನಾಗೇಂದ್ರ ಪ್ರಸಾದ್ ರವರಿಂದ ಈ “ಐಸಿರಿ” ಕಾರ್ಯಕ್ರಮವು ಉದ್ಘಾಟನೆಗೊಂಡಿರುತ್ತದೆ. ಇವರ ಭಾಷಣದ ಒಳ ಅರ್ಥವು ಕರ್ನಾಟಕದ ಭವ್ಯ ಪರಂಪರೆ ಹಾಗೂ ಕನ್ನಡ ಸಾಹಿತ್ಯದ ವಿವಿಧ ಆಯಾಮಗಳ ಬಗ್ಗೆ ತಿಳಿಸಿಕೊಡುತ್ತದೆ. ಗೌರವ ಅತಿಥಿಗಳಾಗಿ ಸಿನಿಮಾ ನಟಿಯರಾದ ಕುಮಾರಿ ಮೇಘ ಶೆಟ್ಟಿ, ತಪಶ್ವಿನಿ ಪೂಣಚ್ಚ ಹಾಗೂ ಪತ್ರಕರ್ತರಾದ ಶ್ರೀ ಸೋಮಣ್ಣ ಮಾಚಿಮಡರವರು ಪಾಲ್ಗೊಂಡಿರುತ್ತಾರೆ. ಈ ಸುಸಂದರ್ಭದಲ್ಲಿ ರಾಜರಾಜೇಶ್ವರಿ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯಾನಂದ್, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ. ಸಿ.ಎನ್.ಸೀತಾರಾಮ್ ಹಾಗೂ ರಾಜರಾಜೇಶ್ವರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಟಿ. ಚಂದ್ರಶೇಖರ್ ರವರು ಉಪಸ್ಥಿತರಿದ್ದಾರೆ.
ಕನ್ನಡ ರಾಜ್ಯೋತ್ಸವ 2022 “ಐಸಿರಿ” ಕಾರ್ಯಕ್ರಮ ಆಚರಿಸುವ ಉದ್ದೇಶವು ನಮ್ಮ ಕರ್ನಾಟಕದ ಭವ್ಯ ಪರಂಪರೆ ಹಾಗು ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಅರಿವನ್ನು ಮೂಡಿಸುವುದಾಗಿದೆ. ಈ ಸುದಿನವು ಸಂಪೂರ್ಣವಾಗಿ ಒಂದು ರೀತಿ ಹಬ್ಬದ ವಾತಾವರಣದಿಂದ ಕೂಡಿದ್ದು, ಸಾಂಪ್ರದಾಯಕ ಸೊಬಗಿನಿಂದ ಕಂಗೊಳಿಸುತ್ತಿದೆ. ಕನ್ನಡದ ನಾಡಗೀತೆಯಾದ “ಭಾರತ ಜನನಿಯ ತನುಜಾತೆ” ಒಕ್ಕೊರಲಿನಿಂದ ಮೊಳಗಿಸಲಾಗಿದೆ. ಈ “ಐಸಿರಿ” ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಕಲಾವಿದ ತಂಡದಿಂದ ನಡಿಸಿಕೊಟ್ಟಿರುವ ಡೊಳ್ಳು, ತಮಟೆ, ಕಂಸಾಳೆ, ಪೂಜಾ ಕುಣಿತ, ಚಿಲಿಪಿಲಿ ಗೊಂಬೆಗಳು ಗಮನ ಸೆಳೆದಿದ್ದು, ನಮ್ಮ ಕರ್ನಾಟಕ ರಾಜ್ಯದ ಸಂಸ್ಕೃತಿಯನ್ನು ಅನಾವರಣಗೊಳಿಸಲಾಗಿರುತ್ತದೆ. ಈ ಅದ್ಭುತ ಪ್ರದರ್ಶನವು ಪ್ರೇಕ್ಷಕರನ್ನು ಮಂತ್ರಮಗ್ಧರನ್ನಾಗಿಸಿ ಮತ್ತು ಈ ಸಭಾಂಗಣವು ವಾದ್ಯಗೋಷ್ಠಿಯಿಂದ ಪ್ರತಿಧ್ವನಿಸಿರುತ್ತದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ನಮ್ಮ ಕನ್ನಡ ನಾಡಿಗೆ ಗೌರವವನ್ನು ಸಲ್ಲಿಸಿರುತ್ತಾರೆ.